Royal Enfield Hunter 350 Walkaround In Kannada | ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಚ್ಚ ಹೊಸ ಹಂಟರ್ 350 ಪ್ರೀಮಿಯಂ ಅರ್ಬನ್ ಸ್ಕ್ರ್ಯಾಂಬ್ಲರ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ಕಳೆದ ವಾರವಷ್ಟೇ ಮಾರುಕಟ್ಟೆ ಪ್ರವೇಶಿಸಿದ್ದು, ಇಂದು ನಮ್ಮ ಬೆಂಗಳೂರಿನಲ್ಲಿ ಹೊಸ ಬೈಕ್ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಹಂಟರ್ 350 ಮಾದರಿಯು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಇತರೆ ಬೈಕ್‌ಗಳಿಂತಲೂ ಸಾಕಷ್ಟು ಹಗುರವಾಗಿದ್ದು, ಅತ್ಯುತ್ತಮ ರೈಡಿಂಗ್ ಕೌಶಲ್ಯತೆ ಹೊಂದಿದೆ. ಹೊಸ ಬೈಕ್ ಮಾದರಿಯು ಮೆಟ್ರೋ ಮತ್ತು ರೆಟ್ರೋ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ 349 ಸಿಸಿ ಜೆ-ಸರಣಿ ಎಂಜಿನ್ ಪಡೆದುಕೊಂಡಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.50 ಲಕ್ಷ ಬೆಲೆ ಹೊಂದಿದೆ. ಹಾಗಾದರೆ ಹೊಸ ಬೈಕಿನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿಗೆ ಎನ್ನುವುದನ್ನು ತಿಳಿಯಲು ಈ ವಾಕ್‌ರೌಂಡ್ ವಿಡಿಯೋ ವೀಕ್ಷಿಸಿ.